ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

ವಲಸೆ ಕಾರ್ಮಿಕರಿಗೆ ಹಿತರಕ್ಷಣಾ ಸೇವೆಗಳು

Home

ಗಣನೀಯ ಸಂಖ್ಯೆಯ ಭಾರತೀಯ ವಲಸಿಗರಿರುವ ದೇಶಗಳ 43 ಭಾರತೀಯ ನಿಯೋಗಗಳಲ್ಲಿ ಸಕ್ರಿಯವಾಗಿರುವ ಭಾರತೀಯ ಸಮುದಾಯ ಹಿತರಕ್ಷಣಾ ನಿಧಿ (ICWF)ಯ ಮೂಲಕ ವಿದೇಶಾಂಗ ಸಚಿವಾಲಯದ ಜೊತೆಗೂಡಿ ಅನಿವಾಸಿ ಭಾರತೀಯರ/ ಅನಿವಾಸಿ ಕನ್ನಡಿಗರ ಸಮಿತಿಯು ಅತಿಥಿ ದೇಶಗಳ ವಂಚಕ ಮಧ್ಯವರ್ತಿಗಳಿಂದ ಮೋಸಹೋದವರಿಗೆ, ಓಡಿಬಂದ ಮನೆಗೆಲಸದವರಿಗೆ, ಅಪಘಾತಗಳಿಗೆ ಬಲಿಯಾದವರಿಗೆ, ತುರ್ತು ಸಹಾಯದ ಅವಶ್ಯಕತೆಯಿರುವ ಅಧಿಕೃತ ದಾಖಲೆಗಳಿಲ್ಲದ ಸಾಗರೋತ್ತರ ಕಾರ್ಮಿಕರಿಗೆ ಅಥವ ಸಮಸ್ಯೆಗಳಿಗೆ ಸಿಲುಕಿದ ಬೇರೆ ಯಾವುದೇ ಭಾರತೀಯ ನಾಗರಿಕರಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ.

           ಸಾಗರೋತ್ತರ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮೃತದೇಹವನ್ನು ಭಾರತಕ್ಕೆ ತರಲು ಅವರ ಉದ್ಯೋಗದಾತ ಪ್ರಾಯೋಜಕರು ಒಪ್ಪದಿದ್ದಲ್ಲಿ ಅಥವ ಒಪ್ಪಂದದ ಮೇರೆಗೆ ಅದು ಸಾಧ್ಯವಿಲ್ಲದಿದ್ದಲ್ಲಿ ಮತ್ತು ಮೃತನ ಕುಟುಂಬದವರಿಗೆ ಆ ವಾಯು ಸಾಗಣೆ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದಿದ್ದಲ್ಲಿ, ಸಾಕ್ಷಿ-ಪ್ರಮಾಣೀಕರಣದ ಆಧಾರದಲ್ಲಿ  ನಿಯೋಗದ ಮುಖ್ಯಸ್ಥರ ಅಥವ ಸ್ಥಳೀಯ ಅಧಿಕಾರಿಗಳ ಶಿಫಾರಸಿನ ಮೇಲೆ, ಅಂತಹ ವೆಚ್ಚಗಳಿಗೂ ಸಹ ಭಾರತೀಯ ಸಮುದಾಯ ಹಿತರಕ್ಷಣಾ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ.

           ವಲಸೆ ಪರೀಕ್ಷೆ ಬೇಕಿರುವಂತಹ (Immigration Clearance Required)  ದೇಶಗಳಲ್ಲಿ ಮೃತರಾದ ವಲಸಿಗರ ದೇಹಾವಶೇಷಗಳನ್ನು ಭಾರತಕ್ಕೆ ತರಲು ಅವರ ಕುಟುಂಬದ ಸದಸ್ಯರು ಕ್ಷಿಪ್ರ ಸೇವೆಗಾಗಿ ಅಂತರ್ಜಾಲದಲ್ಲಿ ಅರ್ಜಿ ವಿವರಗಳನ್ನು ತುಂಬಲು ಮತ್ತು ನಂತರ ಮೃತರ ದೇಹಾವಶೇಷಗಳು ನಿಗದಿತ ಸ್ಥಳ ತಲುಪುವವರೆಗೂ ಅಂತರ್ಜಾಲದಲ್ಲಿ ಅದರ ಸಾಗಣೆಯ ಜಾಡು ಹಿಂಬಾಲಿಸುವ (Online Tracking)ಕುರಿತು ಸಹಾಯ ಒದಗಿಸಲು ಮತ್ತು ಸುದ್ದಿ ಪ್ರಕಟಿಸಲು ಜಿಲ್ಲಾ ಮಟ್ಟದ ಅನಿವಾಸಿ ಭಾರತೀಯರ/ ಅನಿವಾಸಿ ಕನ್ನಡಿಗರ ಹಿತರಕ್ಷಣಾ ಸಮಿತಿಯನ್ನು ಜಾಗೃತಗೊಳಿಸಲು ಕ್ರಮವಹಿಸಲಾಗುತ್ತಿದೆ.

×
ABOUT DULT ORGANISATIONAL STRUCTURE PROJECTS