ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

ನಮ್ಮ ಊರು-ನಮ್ಮ ನಾಡು

Home

 

 ಅನಿವಾಸಿ ಭಾರತೀಯರು/ ಅನಿವಾಸಿ ಕನ್ನಡಿಗರು ತಮ್ಮ ಮಾತೃಭೂಮಿಯೆಡೆಗೆ, ಮುಖ್ಯವಾಗಿ ಶಾಲೆಗಳ ಸುಧಾರಣೆಗೆ, ಸ್ಥಳೀಯ ದೇವಸ್ಥಾನಗಳ ಜೀರ್ಣೋದ್ಧಾರಗಳೆಡೆಗೆ, ಸತತವಾಗಿ ಕೊಡುಗೆಗಳನ್ನು ನೀಡುತ್ತಿದ್ದಾರಲ್ಲದೆ ರಾಜ್ಯದ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದ್ದಾರೆ. ಪಂಚಾಯಿತಿಗಳನ್ನೂ ಒಳಗೊಂಡಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ಅನಿವಾಸಿ ಭಾರತೀಯ ಸಮಿತಿಯ ಜಾಲ ತಾಣಗಳಲ್ಲಿ ಪ್ರದರ್ಶಿಸಿ ಅನಿವಾಸಿ ಭಾರತೀಯರು/ ಅನಿವಾಸಿ ಕನ್ನಡಿಗರು ಅವುಗಳಲ್ಲಿ ಭಾಗವಹಿಸುವಂತೆ ಸುಗಮಗೊಳಿಸುತ್ತದೆ. ಅನಿವಾಸಿ ಭಾರತೀಯರು/ ಅನಿವಾಸಿ ಕನ್ನಡಿಗರು ತಾವೇ ಆರಿಸಿದ ಕ್ಷೇತ್ರಗಳಲ್ಲಿ ಸೂಚಿಸುವ ಯಾವುದೇ ಅಭಿವೃದ್ಧಿ ಯೋಜನೆಯನ್ನು ಅನಿವಾಸಿ ಭಾರತೀಯ ಸಮಿತಿಯು ಆಯಾ ರಾಜ್ಯ ಸರ್ಕಾರದ ಇಲಾಖೆ/ಅಧಿಕಾರಿಗಳೊಂದಿಗೆ ಸುಲಲಿತಗೊಳಿಸುತ್ತದೆ.

        ಅನಿವಾಸಿ ಭಾರತೀಯರ/ ಅನಿವಾಸಿ ಕನ್ನಡಿಗರ ಕೊಡುಗೆಯನ್ನು ಗುರುತಿಸಿ, ಅಭಿನಂದಿಸಲು ಅವರ ಮಾನವೀಯ/ ಹೃದಯಸ್ಪರ್ಶಿ ಕೆಲಸಗಳ ಸಂಕಲನವನ್ನು ಪ್ರತಿ ಆರ್ಥಿಕ ವರ್ಷದಲ್ಲೂ ಪರಿಷ್ಕರಿಸಿ, ಅಂತರ್ಜಾಲ ತಾಣದಲ್ಲಿ ಕ್ಷಿಪ್ರವಾಗಿ ಒದಗಿಸಲಾಗುವುದು.

        ಅನಿವಾಸಿ ಭಾರತೀಯರು ಭಾರತದಲ್ಲಿ ಸಾಮಾಜಿಕ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲು ಒಂದು ವಿಶ್ವಾಸಾರ್ಹವಾದ ಸಾಂಸ್ಥಿಕ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸ್ಥಾಪಿಸಿದ ‘ ಸಾಗರೋತ್ತರ ಭಾರತೀಯರ ಭಾರತ ಅಭಿವೃದ್ಧಿ ಪ್ರತಿಷ್ಠಾನ’ದೊಂದಿಗೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು ಆಪ್ತವಾಗಿ ಕೆಲಸ ಮಾಡುತ್ತದೆ. ಈ ಪ್ರತಿಷ್ಠಾನಕ್ಕೆ 2010ರ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯಿಂದ ವಿನಾಯಿತಿ ದೊರೆತಿದ್ದು, ಕರ್ನಾಟಕ ಹಾಗೂ ಭಾರತ ಸರ್ಕಾರಗಳೆರಡರ ಮುಂಚೂಣಿ ಯೋಜನೆಗಳೆಡೆಗೆ ದಯಾಪರರಾದ ಅನಿವಾಸಿ ಭಾರತೀಯರು ಸಾಗಲು ಅನುವು ಮಾಡಿಕೊಡುತ್ತದೆ.

×
ABOUT DULT ORGANISATIONAL STRUCTURE PROJECTS