ಅನಿವಾಸಿ ಭಾರತೀಯ ಸಮಿತಿ

ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ನಮ್ಮ ಬಗ್ಗೆ

ಕರ್ನಾಟಕ ಮತ್ತು ಅನಿವಾಸಿ ಭಾರತೀಯ  / ಕನ್ನಡಿಗರ ನಡುವೆ ಪರಸ್ಪರ ಸಂಬಂಧ ಹಾಗೂ ಸಂಪರ್ಕವನ್ನು ಏರ್ಪಡಿಸುವ ಮುಂತಾದ ಉದ್ದೇಶಗಳಿಂದ, ಕರ್ನಾಟಕ ಸರ್ಕಾರವು ಅನಿವಾಸಿ ಭಾರತೀಯ ಸಮಿತಿಯನ್ನು

ಸ್ಥಾಪಿಸಿದೆ. ಕರ್ನಾಟಕ ರಾಜ್ಯದ ಬಗ್ಗೆ ಸಮಗ್ರ ಮಾಹಿತಿ ಕೊಟ್ಟು ಪ್ರಗತಿಗೆ ಹಾಗೂ ಬಂಡವಾಳ ಹೂಡಿಕೆಯ ಅವಕಾಶಗಳಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಬಂಡವಾಳಸ್ಥರಿಗೆ ಕೊಡುವುದು ನಮ್ಮ ಇನ್ನೊಂದು ಉದ್ದೇಶ,

ಭಾರತವು ಅನಿವಾಸಿ ಭಾರತೀಯರಿಂದ ಅತ್ಯಂತ ಹೆಚ್ಚು ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ, ಕರ್ನಾಟಕವು, ಮುಖ್ಯವಾಗಿ ತಾಂತ್ರಿಕ ವಲಯದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅತ್ಯಂತ ಆಕರ್ಷಣೀಯ ರಾಜ್ಯ

ಎಂಬುದು ಜಗದ ಸತ್ಯ. ಈ ಸಮಿತಿಯು ತನ್ನ ಮಾಹಿತಿ ಕೋಶವನ್ನು ರಾಜ್ಯದ ಅಭಿವೃದ್ಧಿಗೆ ಬಳಸುವ ನಿರೀಕ್ಷೆ ಹೊಂದಿದ್ದು, ಈ ದಿಶೆಯಲ್ಲಿ ಮುಖ್ಯವಾದ ಹಾಗೂ ನಿರ್ಧಾರಿತ ಕಾರ್ಯಗಳನ್ನು ಪ್ರಾರಂಭಿಸಿ ಅದರ ನಿಟ್ಟನಲ್ಲಿ

ಸಾಗುತ್ತಿದೆ. ಈ ಸಮಿತಿಯು, ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡ ಪರಂಪರೆಯನ್ನು ಸಾಗರದಾಚೆ ಬಿತ್ತರಿಸುವಲ್ಲಿಯೂ ನೆರವಾಗಲಿದೆ.