HELPLINE-OVERSEAS WORKERS - ಸಾಗರೋತ್ತರ ಭಾರತೀಯರಿಗೆ

ಪರಿಚಯ


ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಮತ್ತು ಅನಿವಾಸಿ ಭಾರತೀಯರ / ಕನ್ನಡಿಗರ ನಡುವೆ ಪರಸ್ಪರ ಸಂಬಂಧ ಹಾಗೂ ಸಂಪರ್ಕವನ್ನು ಏರ್ಪಡಿಸುವ ಮುಂತಾದ ಉದ್ದೇಶಗಳಿಂದ, ಕರ್ನಾಟಕ ಸರ್ಕಾರವು ಅನಿವಾಸಿ ಭಾರತೀಯ ಸಮಿತಿಯನ್ನು ಸ್ಥಾಪಿಸಿದೆ. ಕರ್ನಾಟಕ ರಾಜ್ಯದ ಬಗ್ಗೆ ಸಮಗ್ರ ಮಾಹಿತಿ ಕೊಟ್ಟು ಪ್ರಗತಿಗೆ ಹಾಗು ಬಂಡವಾಳ ಹೂಡಿಕೆಯ ಅವಕಾಶಗಳಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಬಂಡವಾಳಸ್ಥರಿಗೆ ಕೊಡುವುದು ನಮ್ಮ ಇನ್ನೊಂದು ಉದ್ದೇಶ. ಭಾರತವು ಅನಿವಾಸಿ ಭಾರತೀಯರಿಂದ ಅತ್ಯಂತ ಹೆಚ್ಹು ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕವು, ಮುಖ್ಯವಾಗಿ ತಾಂತ್ರಿಕ ವಲಯದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅತ್ಯಂತ ಆಕರ್ಷಣೀಯ ರಾಜ್ಯ ಎಂಬುದು ಜಗತ್ಸತ್ಯ. ಈ ಸಮಿತಿಯು ತನ್ನ ಮಾಹಿತಿ ಕೋಶವನ್ನು ರಾಜ್ಯದ ಅಭಿವೃದ್ದಿಗೆ ಬಳಸುವ ನಿರೀಕ್ಷೆ ಹೊಂದಿದ್ದು, ಈ ದಿಶೆಯಲ್ಲಿ ಮುಖ್ಯವಾದ ಹಾಗೂ ನಿರ್ಧಾರಿತ ಕಾರ್ಯಗಳನ್ನು ಪ್ರಾರಂಭಿಸಿ ಅದರ ನಿಟ್ಟಿನಲ್ಲಿ ಸಾಗುತ್ತಿದೆ. ಈ ಸಮಿತಿಯು, ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡ ಪರಂಪರೆಯನ್ನು ಸಾಗರದಾಚೆ ಬಿತ್ತರಿಸುವಲ್ಲಿಯೂ ನೆರವಾಗಲಿದೆ.

ಧ್ಯೆeಯೋದ್ಧೆeಶಗಳು :

  • ಹೊರದೇಶಗಳಲ್ಲಿ ನೆಲೆಸಿರುವ ಕರ್ನಾಟಕದ ಜನರ  ಹಿತಾಸಕ್ತಿಗಳಿಗೆ ಪೂರಕವಾದ ಎಲ್ಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
  • ಹೊರದೇಶಗಳಲ್ಲಿನ ಕರ್ನಾಟಕದ ಜನರು, ಕನ್ನಡ ಸಾಹಿತ್ಯ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಅಭಿವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಲು ಸಹಕರಿಸುವುದು.
  • ಅನಿವಾಸಿ ಭಾರತೀಯರ ಸಹಕಾರದೊಂದಿಗೆ ರಾಜ್ಯದಲ್ಲಿನ ಐ.ಟಿ., ಬಿ.ಟಿ. / ವಿಜ್ನ್ಯಾನ / ತಂತ್ರಜ್ನ್ಯಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸುವದು ಮತ್ತು ಅನುಷ್ಥಾನಗೊಳಿಸುವುದು. 
  • ಅನಿವಾಸಿ ಭಾರತೀಯರನ್ನು ರಾಜ್ಯದಲ್ಲಿನ ಶೈಕ್ಷಣಿಕ ಹಾಗು ಇನ್ನಿತರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು.
  • ಅನಿವಾಸಿ ಭಾರತೀಯರಿಂದ ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವುದು.
  • ಅನಿವಾಸಿ ಭಾರತೀಯರನ್ನು ರಾಜ್ಯದ ಸಾಮಾಜಿಕ ಹಾಗು ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.
  • ಅನಿವಾಸಿ ಭಾರತೀಯರ ಕ್ಷeಮಾಭಿವ್ರುದ್ಧಿಗೆ ಸಂಭಂಧಿಸಿದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. 
     

ಚಟುವಟಿಕೆಗಳು:

  • ಅನಿವಾಸಿ ಭಾರತೀಯರು - ಕರ್ನಾಟಕ ಗ್ರಾಮಾಭಿವೃದ್ದಿ, ಕೈಗಾರಿಕೆ ಮತ್ತು ಉದ್ದಿಮೆ, ವೈದ್ಯಕೀಯ ಸೌಲಭ್ಯ, ಸಂಸ್ಕೃತಿ, ಭಾಷೆ, ಜನಸೇವೆ ಮತ್ತು ಪ್ರವಾಸೋದ್ಯಮ ಮುಂತಾದ ನಿರ್ದಿಷ್ಟ ವಲಯಗಳಲ್ಲಿ ಚಟುವಟಿಕೆ ಕೈಗೊಳ್ಳಲು ಪರಸ್ಪರ ಪ್ರಕ್ರಿಯೆ/ಆಲೋಚನೆ ವಿನಿಮಯ ಮತ್ತು ನೇರ ಪಾಲ್ಗೊಳ್ಳುವಿಕೆಗೆ ನೆರವಾಗುವುದು.
  • ಅನಿವಾಸಿ ಕನ್ನಡಿಗರ ಕೋರಿಕೆಯ ಮೇಲೆ ನಾನಾ ಕ್ಷೇತ್ರಗಳ ತಜ್ಞರ ಪರಸ್ಪರ ಪ್ರಕ್ರಿಯೆಯ ಬೇಡಿಕೆಗಳಿಗೆ ಅನುಕೂಲ ಮಾಡಿಕೊಡುವುದು.
  • ಕೇಂದ್ರ ಸರ್ಕಾರದ ಅನಿವಾಸಿ ಭಾರತೀಯರ ಕಾರ್ಯಕ್ರಮಕ್ಕೆ ಮುಂಚಿತವಾಗಿ ವಾರ್ಷಿಕ ಸಭೆಗಳನ್ನು ಏರ್ಪಡಿಸುವುದು. ಸಮಾನ್ಯವಾಗಿ ಇಂತಹ ಸಭೆಗಳು ಜನವರಿ ಮೂದಲ ವಾರದಲ್ಲಿ ನಡೆಯುವುದು.
  • ಅನಿವಾಸಿ ಭಾರತೀಯರು / ಕರ್ನಾಟಕ ಸಂಜಾತರು ಇವರುಗಳ ಮಾಹಿತಿ ಕೋಶ (ಡಾಟಾ ಬೇಸ್) ರೂಪಿಸುವುದು. ಇದರ ಜೊತೆಗೆ, ವಿದೇಶಗಳಲ್ಲಿನ ಭಾರತೀಯ ರಾಯಭಾರೀ ಕಚೇರಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಂಬಂಧಿತ ಇಲಾಖೆಗಳನ್ನು ಕುರಿತು ಮಾಹಿತಿ ಹೊಂದಿರುವುದು.
  • ವಾರ್ತಾ ಪತ್ರ / ಸುತ್ತೋಲೆಗಳನ್ನು ಪ್ರಕಟಿಸುವುದು.





Last modified at 6/20/2017 11:22 AM by kar user
ಲಿಂಕ್ಗಳು

ವಿನ್ಯಾಸ ಮತ್ತು ಅಭಿವೃದ್ಧಿ : ಅನಿವಾಸಿ ಭಾರತೀಯ ಸಮಿತಿ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top